ಭಟ್ಕಳ:೧೪, ಭಟ್ಕಳದ ರಾಬಿತಾ ಸೂಸೈಟಿ , ಸೇವಾ ವಾಹಿನಿ ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ಹಾಗೂ ಭಟ್ಕಳ ತಾಲೂಕಾ ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಇತ್ತಿಚೆಗೆ ನಗರದ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಮೋತಿ ಬಿಂದು ಜೋಡಣೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ನುರಿತ ಬೆಂಗಳೂರಿನ ವೈದ್ಯರಾದ ಡಾ.ಕೃಷ್ಣ ಮೋಹನ್,ಡಾ.ಪ್ರಮೋದ್ ಡಾ. ಸೈಯ್ಯದ್ ಝುಲ್ಫಿಖಾರ‍್ ಅವರು ಇದನ್ನು ಯಶಸ್ವಿಯನ್ನಾಗಿಸಿದರು. ಈ ಶಿಬಿರದಲ್ಲಿ ಒಟ್ಟು ೩೧೨ ರೋಗಿಗಳಿಗೆ ಕಣ್ಣಿತ ತಪಾಸಣೆಯನ್ನು ನಡೆಸಲಾಯಿತು. ಅದರಲ್ಲಿ ೬೦ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಲೆಸರ‍್ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ನೆರವೇರಿಸಲಾಯಿತು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಬಿತಾ ಸೂಸೈಟಿಯ ಅಧ್ಯಕ್ಷ ಸೈಯ್ಯದ್ ಅಬ್ದುಲ್ಲಾ ಲಂಕಾ, ಪ್ರಾ.ಕಾ.ಸೈಯ್ಯದ್ ಎಸ್.ಜೆ. ಹಾಷಿಮ್, ಸೇವಾವಾಹಿನಿಯ ಅಧ್ಯಕ್ಷ ಸುರೇಂದ್ರ ಶಾನುಭಾಗ, ಪುರಸಭೆಯ ಅಧ್ಯಕ್ಷ ಪರ್ವೇಝ್ ಕಾಸಿಮ್ಜಿ, ವೈದ್ಯಾಧಿಕಾರಿ ಡಾ. ಮಂಜುನಾಥ್, ಸಿದ್ದೀಖಾ ಮೀರಾ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.